¡Sorpréndeme!

ನಾವೇ ದುಡಿಬೇಕು, ನಾವೇನು ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ: ಯಶ್ | Yash Mocks Nikhil Kumaraswamy

2021-07-06 1 Dailymotion

ನಾವೇ ದುಡಿಬೇಕು, ನಾವೇನು ಅಪ್ಪ, ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ: ಯಶ್ | Yash Mocks Nikhil Kumaraswamy

ನಾವೇ ದುಡಿಬೇಕು, ನಾವೇನು ಅಪ್ಪ ಮತ್ತು ತಾತನ ಆಸ್ತಿಯಲ್ಲಿ ಬದುಕಿಲ್ಲ ಬಿಡಿ ಎಂದು ರಾಕಿಂಗ್ ಸ್ಟಾರ್ ಯಶ್ ಟಾಂಗ್ ನೀಡಿದ್ದಾರೆ.

ಮಂಡ್ಯದ ಯರಗನಹಳ್ಳಿಗೆ ಆಗಮಿಸಿದ ಯಶ್ ಅವರಿಗೆ ಗ್ರಾಮದ ಮಹಿಳೆಯೊಬ್ಬರು ನಿಖಿಲ್ ಹೇಳಿಕೆ ಬಗ್ಗೆ ಕೇಳಿದ್ದಾರೆ. ಈ ವೇಳೆ ಯಶ್, “ನಾವು ಬಡವರು. ನಮಗೆ ಯೋಗ್ಯತೆ ಇರಲ್ಲ. ದುಡಿದು ಸಹಾಯ ಮಾಡಿಕೊಳ್ಳಬೇಕು. ಮಾಡೋಣ ಬಿಡಿ. ನಾವು ನಮ್ಮ ಅಪ್ಪ ಹಾಗೂ ತಾತನ ಆಸ್ತಿಯಿಲ್ಲ ಬದುಕಿಲ್ಲ. ಯೋಗ್ಯತೆ ಬೆಳೆಸಿಕೊಳ್ಳೋಣ ಬಿಡಿ” ಎಂದು ಟಾಂಗ್ ನೀಡಿದ್ದಾರೆ.



ನಿಖಿಲ್ ಹೇಳಿದ್ದೇನು?
ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ಟಾಂಗ್ ಕೊಟ್ಟಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್, ನಾನು ಸಮಾಧಾನವಾಗಿಯೇ ಇದ್ದೇನೆ. ಸಮಾಧಾನವಾಗಿಯೇ ಇರುತ್ತೇನೆ. ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದರು. ನಾನು ಯೋಗ್ಯನೋ ಅಲ್ಲವೋ ಎಂಬುದನ್ನು ನನ್ನ ತಂದೆ-ತಾಯಂದಿರು ಮತ್ತು ಮಂಡ್ಯದ ಜನತೆ ತೀರ್ಮಾನಿಸುತ್ತಾರೆ. ನಾನು ಸ್ಪಷ್ಟನೆ ನೀಡಬೇಕಿತ್ತು. ಬೇರೆ ಯಾರನ್ನೋ ಕೀಳಾಗಿ ಕಾಣಬೇಕು ಎಂದು ಮಾತನಾಡಲಿಲ್ಲ. ನಾನು ನನ್ನ ಕಾರ್ಯಕರ್ತ ಬಂಧುಗಳಿಗೆ ಸ್ಪಷ್ಟನೆ ಕೊಟ್ಟೆ ಅಷ್ಟೇ ಎಂದು ಹೇಳಿದ್ದರು.

For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv